ಪೆರ್ಲ: ಯುವ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಸಿಪಿಎಂ ನಾಯಕರ ಪಿತೂರಿಯಿಂದ ಪೆರ್ಲದಲ್ಲಿ ಕೊಲೆಯಾದ ಜಬ್ಬಾರ್ ಪೆರ್ಲ ಅವರ 15ನೇ ಹುತಾತ್ಮ ದಿನವನ್ನು ಮಂಡಲ ಕಾಂಗ್ರೆಸ್ ವತಿಯಿಂದ ಇಂದಿರಾ ಭವನದಲ್ಲಿ ಆಚರಿಸಲಾಯಿತು. ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಝಲ್ ಕಾರ್ಯಕ್ರಮ ಉದ್ಘಾಟಿಸಿದರು. ಡಿಸಿಸಿ ಉಪಾಧ್ಯಕ್ಷ ಬಿ.ಪಿ.ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕೇಯನ್ ಪೆರಿಯ, ಎಣ್ಮಕಜೆ ಪಂಚಾಯತ್ ಸದಸ್ಯ ರಾಧಾಕೃಷ್ಣನ್ ಮಾಸ್ಟರ್, ಡಿಕೆಟಿಎಫ್ ಜಿಲ್ಲಾಧ್ಯಕ್ಷ ವಾಸುದೇವನ್ ನಾಯರ್, ಶ್ರೀನಾಥ್ ಬದಿಯಡ್ಕ, ಜುನೈದ್ ಉರುಮಿ, ಲೀಗ್ ಮುಖಂಡರಾದ ಸಿದ್ದೀಕ್ ಖಂಡಿಗೆ ಸಿದ್ದೀಕ್ ವೊಲಮುಗಾರ್ ಮಾತನಾಡಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಂಭೀರಾ ಅಧ್ಯಕ್ಷತೆ ವಹಿಸಿದ್ದರು, ಅಬ್ದುಲ್ ರಝಾಕ್ ಅಜಿಲಡ್ಕ ಸ್ವಾಗತಿಸಿ, ಮಹಿಳಾ ನಾಯ್ಕ್ ವಂದಿಸಿದರು.
0 Comments