ದುಬೈ : ಯು.ಎ.ಇ. ಬಂಟ್ಸ್ ನ ಆಶ್ರಯದಲ್ಲಿ ನಡೆಯುವ 47 ನೇ ವರ್ಷದ ಯು.ಎ.ಇ. ಬಂಟೆರ್ನ ಕೂಡುಕಟ್ಟ್ " ಗಲ್ಫ್ ಬಂಟೋತ್ಸವ" ಕಾರ್ಯಕ್ರಮವು ನವೆಂಬರ್ 24 ರಂದು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಯು.ಎ.ಇ. ಬಂಟ್ಸ್ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ತಿಳಿಸಿದರು.
ನಗರದ ಅಲ್ ನಸರ್ ಲೇಸರ್ ಲ್ಯಾಂಡ್ ನ ಐಸ್ ರಿಂಕ್ ನ ಸಭಾಂಗಣದಲ್ಲಿ ಕಾರ್ಯಕ್ರಮವು ಜರಗಲಿದ್ದು ಯು.ಎ.ಇ.ಯಲ್ಲಿ ಇರುವ ಎಲ್ಲಾ ಬಂಟ ಬಾಂಧವರು ಅಲ್ಲದೆ ಊರಿನಿಂದ ಅತಿಥಿ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದರೆ ಎಂದು ತಿಳಿಸಿದರು.
2024-25 ನೇ ಸಾಲಿನ ಬಂಟ ವಿಭೂಷಣ ಪ್ರಶಸ್ತಿಯನ್ನು ಎಂ.ಆರ್.ಜಿ. ಗ್ರೂಪ್ ಚೇರ್ಮನ್ ಡಾ.ಕೆ.ಪ್ರಕಾಶ್ ಶೆಟ್ಟಿಯವರಿಗೆ ಗೌರವಿಸಲಾಗುವುದು.ಕಾರ್ಯಕ್ರಮದ ಉದ್ಘೋಷಕರಾಗಿ ನಿತೇಶ್ ಶೆಟ್ಟಿ ಎಕ್ಕಾರು ರವರು ಆಗಮಿಸಲಿದ್ದರೆ ಹಾಗೂ ಯುಎಇಯ ಪ್ರತಿಭಾವಂತ ಬಂಟ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ತಿಳಿಸಿದರು.



0 Comments