ಪೆರ್ಲ : ಮೊಗೇರು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಸಮಿತಿ ಸಹಕಾರದಲ್ಲಿ ಆರ್.ಎಸ್.ಬಿ.ಯುವ ಸಂಘ ಮೊಗೇರು ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರದ ಶಂಕರ ವ್ರತ ಹಾಗೂ ಶ್ರೀ ದೇವಿಗೆ ದೀಪಾಲಂಕರ ಸಹಿತ ವಿಶೇಷ ರಂಗಪೂಜೆ ನಡೆಯಿತು.
ವೇದಮೂರ್ತಿ ಬಾಲಕೃಷ್ಣ ಭಟ್ ಪಾಲೆಚ್ಚಾರ್ ಅವರ ಮಾರ್ಗದರ್ಶನದಲ್ಲಿ
ಕಲಿಯುಗದ ಕಲ್ಪತರು ಎಂದೇ ವಿಶೇಷಣಗಳಿಂದ ಉಲ್ಲೇಖಿಸಲ್ಪಡುವ ಸರ್ವಾಭಿಷ್ಟ ಸಿದ್ಧಿಪ್ರದವಾದ ಶಿವಾರಾಧನೆಯ ಮಹತ್ವ ಶ್ರೀಸಚ್ಚಿದಾನಂದ ಭಟ್ ಮೊಗೇರು ಅವರಿಂದ ಕಥಾ ನಿರೂಪಣೆ ಭಕ್ತಿಪೂರಕವಾಗಿ ಮೂಡಿ ಬಂತು. ಬಳಿಕ ಶ್ರೀ ದೇವಿಗೆ ವಿಶೇಷ ರಂಗಪೂಜೆ ದೀಪಾಲಂಕಾರ ಸೇವೆಯ ಸಂದರ್ಭ
ಸುಮಾರು 1500 ಹಣತೆ ಗಳನ್ನು ಅತೀ ಕಡಿಮೆ ಅವಧಿಯಲ್ಲಿ ಬೆಳಗಿಸಿದ ಭಕ್ತರು,ಶ್ರೀ ಕ್ಷೇತ್ರ ಭಜನಾ ಸಮಿತಿ ಯಿಂದ ನಡೆದ ವಿಶೇಷ ಭಜನಾ ಸೇವೆ ಶ್ರೀ ದೇವಿಯ ರಂಗ ಪೂಜೆ ಹಾಗೂ ಅಷ್ಟವಾದನ ಸೇವೆಯ ವೈಭವವನ್ನು ನೆರೆದ ಭಕ್ತರು ಭಕ್ತಿಯಿಂದ ಕಣ್ಣುತುಂಬಿಸಿಕೊಂಡು ಕೃತಾರ್ಥರಾದರು.



0 Comments