ಶೇಣಿ ಅಂಗನವಾಡಿಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

 


ಪೆರ್ಲ :  ಎಣ್ಮಕಜೆ ಗ್ರಾಮ ಪಂಚಾಯತಿನ 14ನೇ ವಾರ್ಡಿನ ಶೇಣಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು  ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್  ಜೆ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು. 


ಅಂಗನವಾಡಿ ಅಭಿವೃದ್ಧಿ ಸಮಿತಿಯ ಅಬ್ದುಲ್ ಖಾದರ್ ಮೌಲವಿ ಅಧ್ಯಕ್ಷತೆವಹಿಸಿದ್ದರು.‌ ಆಶಾ‌ ಕಾರ್ಯಕರ್ತೆ ಸುನೀತಾ,  ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಅಧ್ಯಾಪಕಿ ಕಮಲ ಸ್ವಾಗತಿಸಿ ಸಹಾಯಕಿ ಸುಮ‌ ಎಸ್ ವಂದಿಸಿದರು.

Post a Comment

0 Comments