ಕಾಸರಗೋಡು : ನಾಡಿನ ಪ್ರಗತಿಗಾಗಿ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಎಲೆ ಮರೆಯ ಕಾಯಿಯಂತಿರುವ ಸದ್ದಿಲ್ಲದ ಸಮಾಜ ಸೇವಕ, ಸಂಘಟಕ ರಾಮ ಪಟ್ಟಾಜೆ ಅವರನ್ನು ಪ್ರಗತಿ ಸ್ಪೇಶಲ್ ಶಾಲೆ ಉಳಿಯತ್ತಡ್ಕದಲ್ಲಿ ನಡೆದ ಮಕ್ಕಳ ದಿನಾಚರಣೆ ಸಂದರ್ಭ ಸನ್ಮಾನಿಸಲಾಯಿತು. ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ಅಧ್ಯಕ್ಷರಾಗಿರುವ ರಾಮ ಪಟ್ಟಾಜೆ ಅವರು ಹಿಂದುಳಿದ ವರ್ಗದ
ಶಾಲಾ ಕಾಲೇಜು ಮಕ್ಕಳ ಪಠಣ ಕಾರ್ಯಗಳಲ್ಲಿ ಮಾರ್ಗದರ್ಶಕರಾಗಿ ಸಹಾಯವನ್ನೀಯುತ್ತಿರುವುದಲ್ಲದೆ ಬದಿಯಡ್ಕ ಗ್ರಾಮ ಪಂಚಾಯತಿನ ಜನಾನುರಾಗಿ ಸಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರು ಪ್ರಕಟಿಸಿದ 'ರಾಮ ಕಂಡ ಭೀಮ ' ಎಂಬ ವ್ಯಕ್ತಿ ಚಿತ್ರ ಸಾರಸ್ವತ ರಂಗದಲ್ಲಿ ಪುಸ್ತಕ ರೂಪದಲ್ಲಿ ಹೊರ ಬಂದಿದೆ.


0 Comments