ಸಮಾಜ ವಿಜ್ಞಾನ ಮೇಳದಲ್ಲಿ ಶೇಣಿ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

 


ಪೆರ್ಲ : ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಮೇಳದ ಪ್ರತಿಕೃತಿ ಮಾದರಿ(ಸ್ಟಿಲ್ ಮಾಡೆಲ್) ರಚನೆ ಹೈಸ್ಕೂಲ್ ವಿಭಾಗದ ಸ್ಪರ್ಧೆಯಲ್ಲಿ ಎಗ್ರೇಡಿನೊಂದಿಗೆ  ಪ್ರಥಮ ಸ್ಥಾನದೊಂದಿಗೆ

ಶೇಣಿ ಶಾಲಾ ವಿದ್ಯಾರ್ಥಿಗಳಾದ ಅಭಿದೀಪ್ ಹೆಚ್.ಕೆ ಮತ್ತು ಲಕ್ಷ್ಮಿಪ್ರಿಯ ಎಸ್. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ ಎಂಬ ವಿಷಯದ ಆಧಾರದಲ್ಲಿ ಇವರು ತಯಾರಿಸಿದ ಮಾದರಿ ಪ್ರಥಮ ಸ್ಥಾನ ಗಳಿಸಿಕೊಂಡಿದೆ.  ಇವರನ್ನು ಶಾಲಾ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್ ಮತ್ತು ರಕ್ಷಕ  ಶಿಕ್ಷಕ ಸಮಿತಿ, ಶಾಲಾ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.

Post a Comment

0 Comments