ಎಣ್ಮಕಜೆ ಗ್ರಾಮ ಪಂಚಾಯತಿನಲ್ಲಿ ಕುಟುಂಬಶ್ರೀ ಸಿಡಿಎಸ್ ನ ಬಾಲ ಪಂಚಾಯತ್ ರೂಫೀಕರಣ


ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಬಾಲ ಸಭಾ  ಮಕ್ಕಳ ಬಾಲ ಪಂಚಾಯತ್ ರೂಫೀಕರಣ ಕಾರ್ಯಕ್ರಮ ಪಂಚಾಯತು ಸಭಾಂಗಣದಲ್ಲಿ ಜರಗಿತು. 

ಪಂ.ಅಧ್ಯಕ್ಷ ಸೋಮಶೇಖರ ಜೆ ಎಸ್ ಉದ್ಘಾಟಿಸಿದರು. ಕುಟುಂಬಶ್ರೀ ಸಿಡಿಎಸ್ ಚೇರ್ ಪರ್ಸನ್ ಜಲಜಾಕ್ಷಿ ಸಭೆಯ ಅಧ್ಯಕ್ಷತೆವಹಿಸಿದ್ದರು. 

ಪಂಚಾಯತ್ ಉಪಾಧ್ಯಕ್ಷೆ  ರಮ್ಲ ಇಬ್ರಾಹಿಂ, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಬಿ ಹನೀಫ್, ಸಿಡಿಎಸ್  ಉಪಾಧ್ಯಕ್ಷೆ ಶಶಿಕಲ ಸ್ವರ್ಗ, ಎಸ್ ಟಿ ಪ್ರಮೋಟರ್ ವನಜ,ಶಶಿಕಲ,ಕುಸುಮ, ಲೆಕ್ಕ ಪರಿಶೋಧಕಿ ಮಮತ, ಮೆಂಟರ್ ಗಳಾದ ಭವ್ಯ,ಫಸರುನ್ನಿಶ, ಕೌನ್ಸಿಲರ್ ಪ್ರಸೀತಾ ಮೊದಲಾದವರು ಭಾಗವಹಿಸಿದ್ದರು.

ಉದಯ ಕುಮಾರಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಾಲ ಸಭಾ ಮಕ್ಕಳಿಗೆ ಚಿತ್ರರಚನೆ ಸ್ಪರ್ಧೆಯನ್ನು ನಡೆಸಲಾಯಿತು.

Post a Comment

0 Comments