ಉಪ್ಪಳ : ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕಿನಲ್ಲಿ ಇಂದು ಚಿನ್ನಾಭರಣ ಸಾಲ ಉದ್ಘಾಟನೆಯು ಇಂದು (ನ.4) ಉಪ್ಪಳ ನಯಾಬಜಾರಿನಲ್ಲಿರುವ ಬ್ಯಾಂಕಿನ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ
ಜರಗಲಿದೆ. ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕಿ ಅಧ್ಯಕ್ಷ ನ್ಯಾಯವಾದಿ ಶಾಜಿ ಮೋಹನ್ ಉದ್ಘಾಟಿಸುವರು.
ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸುವರು. ರಾಜ್ಯ ಸಮಿತಿ ಉಪಾಧ್ಯಕ್ಷ ನೀಲಕಂಠನ್, ಜೊಯಿಂಟ್ ರಿಜಿಸ್ಟ್ರಾರ್ ಲಸಿತಾ ಕೆ, ವಿವಿಧ ವಲಯದ ಗಣ್ಯರು, ಬ್ಯಾಂಕ್ ಆಡಳಿತ ನಿರ್ದೇಶಕರುಗಳು ಸಭೆಯಲ್ಲಿ ಉಪಸ್ಥಿತರಿರುವರು.


0 Comments