ಕಾಸರಗೋಡು : ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ 2024 ವನ್ನು ಕಾಸರಗೋಡು ಕನ್ನಡ ಗ್ರಾಮದಲ್ಲಿ 2024 ನವೆಂಬರ್ 10 ಆದಿತ್ಯವಾರ ರಂದು ಬೆಳಿಗೆ ಗಂಟೆ 9.00 ರಿಂದ ರಾತ್ರಿ 9.00 ರ ವರೆಗೆ ವಿವಿಧ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ ಇದರ ಸರ್ವಾಧ್ಯಕ್ಷರಾಗಿ ಪೆರ್ಲದ ಪಳ್ಳಕಾನ ನಿವಾಸಿ ಬದಿಯಡ್ಕ ಭಾರತಿ ವಿದ್ಯಾಪೀಠದ ವಿದ್ಯಾರ್ಥಿನಿ ಬಹುಭಾಷಾ ಕವಯತ್ರಿ ಹರ್ಷಿತಾ ಪಿ. ಆಯ್ಕೆಯಾಗಿದ್ದಾರೆ. ಐತ್ತಪ್ಪ ನಾಯ್ಕ ವೈ - ನಳಿನಿ ದಂಪತಿಗಳ ಪುತ್ರಿಯಾದ ಹರ್ಷಿತಾ ಪಿ 9ನೇ ತರಗತಿ ವಿದ್ಯಾರ್ಥಿನಿ. ಕನ್ನಡ ,ಇಂಗ್ಕಿಷ್ ಹಾಗೂ ಸಂಸ್ಕೃತ ಭಾಷಾ ಕವಿತೆಗಳನ್ನು ರಚಿಸುವ ಈಕೆ ಕನ್ನಡ,ಇಂಗ್ಲಿಷ್ ಕಥೆ ರಚನೆ, ಇಂಗ್ಲಿಷ್ ಕನ್ನಡ ಮತ್ತು ಮಾತೃಭಾಷೆ ಮರಾಟಿಯಲ್ಲಿ ಭಾಷಣಗೈಯುವಲ್ಲಿ ಗುರುತಿಸಿಕೊಂಡಿದ್ದಾಳೆ. ಯಕ್ಷಗಾನ ಕಲೆಯನ್ನು ಅಭ್ಯಾಸಿಸುತ್ತಿರುವ ಹರ್ಷಿತಾ ಹಲವಾರು ಕವಿಗೋಷ್ಠಿಗಳಲ್ಲಿ ತನ್ನ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿ ಜನಮನ್ನಣೆ ಗಳಿಸಿಕೊಂಡಿದ್ದಾಳೆ. ಯುವ ಸಂಘಟಕ ಸುಭಾಷ್ ಪೆರ್ಲರ ನೇತೃತ್ವದ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಮೂಲಕ ತನ್ನ ಸಾರಸ್ವತ ಪ್ರತಿಭೆಗೆ ವೇದಿಕೆ ಕಂಡುಕೊಂಡ ಹರ್ಷಿತಾ ಹಿರಿಯ ಕವಿ ರಾಧಾಕೃಷ್ಣ ಉಳಿಯತ್ತಡ್ಕರ ಮಾರ್ಗದರ್ಶನದಲ್ಲಿ ಸಾಹಿತ್ಯ ವಲಯದಲ್ಲಿ ಗಮನಾರ್ಹ ಪ್ರತಿಭೆಯಾಗಿದ್ದಾಳೆ. ಇದೀಗ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಈಕೆಯ ಬಾಲ್ಯ ಕಾಲ ಸಾಹಿತ್ಯ ಸಾಧನೆಗೊಂದು ಅಭಿಮಾನದ ಗರಿಮೆಯಾಗಿದೆ.
0 Comments