ಪೆರ್ಲ : ಕಾಟುಕುಕ್ಕೆ ದೇವಸ್ಥಾನ ಪರಿಸರದ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ವಿವಿಧ ಕಾರ್ಯಕ್ರಮದೊಂದಿಗೆ ಆರಿಸಲಾಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ಪಂಚಾಯತ್ ಸದಸ್ಯೆ ಮಲ್ಲಿಕಾ ಜೆ ರೈ ಮಾಡಿದರು. ಅದ್ಯಕ್ಷ ರಾಗಿ ಪೆರ್ಲ ವ್ಯಾಪಾರಿ ವ್ಯವಸಾಯಿ ಏಕೋಪನ ಘಟಕದ ಅಧ್ಯಕ್ಷಾದ ರಾಜರಾಮ ಶೆಟ್ಟಿ ಪಟ್ಲ ವಹಿಸಿ ಇಂದಿನ ಮಕ್ಕಳೇ ಮುಂದಿನ ಜನಾಂಗ . ಯಾರಿಂದಲೂ ಕಸಿಯಾಲಾಗದ ಸಂಪತ್ತು ಎಂದರೆ ವಿದ್ಯೆ ಮೊಬೈಲ್ ನಿಂದ ಇಂದಿನ ವಿದ್ಯಾಭ್ಯಾಸ ದ ಒಲಿತು ಕೆಡುಕನ್ನು ಇಂದು ಮಕ್ಕಳು ಹಾಗೇನೆ ಹೆತ್ತವರು ಚಿಂತಿಸಬೇಕಾಗಿದೆ ಎಂದರು ಮುಖ್ಯ ಅತಿಥಿಯಾಗಿ ನಿವೃತ್ತ ಬ್ಯಾಂಕ್ ಉದ್ಯೋಗಿ ಜಯರಾಮ ಭಂಡಾರಿ ಹಾಗು ಅಂಗನವಾಡಿ ಶಿಕ್ಷಕಿ ಸುರೇಖ ರೈ ಪಂಡಬೈಲು,ಅಂಗನವಾಡಿ ಸಹಾಯಕಿ ಜಯ ಪೆರ್ಲತಡ್ಕ ಇವರು ಉಪಸ್ಥಿತರಿದ್ದರು.ಕೊನೆಗೆ ಮಕ್ಕಳಿಗೆ ಆಟೋಟ ಕಾರ್ಯಕ್ರಮ ನಡೆಯಿತು .


0 Comments