ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸ್ವಯಂಸೇವಕ ಸಮಿತಿ ರಚನೆ


ಪುತ್ತಿಗೆ : ಅಂಗಡಿಮೊಗರು ಸಮೀಪದ ಇತಿಹಾಸ ಪ್ರಸಿದ್ಧ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಕಾರ್ಯಗಳ ಪೂರ್ವಭಾವಿಯಾಗಿ ಕ್ಷೇತ್ರ ಸನ್ನಿಧಿಯಲ್ಲಿ ಜರಗಿದ ಯುವ ಕಾರ್ಯಕರ್ತರ ಸಭೆಯಲ್ಲಿ ನೂತನ  ಸ್ವಯಂಸೇವ ಸಮಿತಿಯನ್ನು ರೂಪೀಕರಿಸಲಾಯಿತು . ಸಮಿತಿಯ ಅಧ್ಯಕ್ಷರಾಗಿ ಶ್ರಿ ಚಂದ್ರಹಾಸ ರೈ ಆಮಿನೆ ಹಾಗೂ ಕಾರ್ಯದರ್ಶಿಯಾಗಿ ಶ್ರಿ ಉಮೇಶ್ ಮಂಟಂಪಾಡಿಯವರನ್ನು ಆಯ್ಕೆ ಮಾಡಲಾಯಿತು ‌. ದೇವಸ್ಥಾನದ ಪ್ರದೇಶವಾರು ಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಆರಿಸಲಾಗಿದ್ದು ಕಮ್ಮಂತಿಲ ಭಾಗಕ್ಕೆ ಆನಂದ ರೈ ಕಮ್ಮಂತಿಲ, ಬಾಲಕೃಷ್ಣ ಕಮ್ಮಂತಿಲ, ಮನೋಜ್ ಕಮ್ಮಂತಿಲ, ಸದಾನಂದ ಪರ್ಲರ್ಯ,

ಆಮಿನೆ :ಜಿತೇಂದ್ರ,ಬಾಲಕೃಷ್ಣ ರೈ, ಸಚಿನ್
ಕೋರಿಕ್ಕಾರು : ಶಿವರಾಮ ಕೋರಿಕ್ಕಾರು ,ಚಂದ್ರಶೇಕರ,ವಸಂತ ಕೆ ಎಮ್
ಒರ್ಕೂಡಲು,,ಮಂಜತಡ್ಕ : ಬಾಲಕೃಷ್ಣ ರೈ ಕೊರತ್ತಿಪ್ಪಾರೆ, ನಾರಾಯಣ ಶೆಟ್ಟಿ,ರಾಘವ ಮಂಜತ್ತಡ್ಕ
ದೇಲಂಪಾಡಿ : ಜಯರಾಮ ರೈ ,ಅರುಣ್ ಕಣ್ಣಹಿತ್ತಿಲು, ವಸಂತ ಡಿ,ಪ್ರಭಾಕರ ಡಿ, ವಸಂತ ರೈ ,ರಾಮ ರೈ
ನೈಮೊಗರು : ಮಹಾಬಲ ರೈ ,ಬಾಲಕೃಷ್ಣ  ರೈ.ಕೆ, ಪುಷ್ಪರಾಜ ರೈ ,ನಿತಿನ್ ರೈ
ಮಂಟಂಪಾಡಿ : ತ್ಯಾಂಪಣ್ಣ ರೈ , ಗಿರೀಶ್, ನಿತಿನ್ ಕುಮಾರ್ ಹೆಗ್ಡೆ ಅವರನ್ನು ಆರಿಸಲಾಯಿತು.

ಕ್ಷೇತ್ರದ ಮಾಡು,,ಶಾಸ್ತರ ಗುಡಿ ಹಾಗೂ ನಮಸ್ಕಾರ ಮಂಟಪಕ್ಕೆ ತಾಮ್ರದ ಹೊದಿಕೆ, ಸುತ್ತು ಚಪ್ಪರದ ಹೊದಿಕೆ, ಪಡು ಗೋಪುರ ನಿರ್ಮಾಣ ಜತೆಗೆ ಮೂಲ ನಾಗ ಸಾನಿಧ್ಯ ಜೀರ್ಣೋದ್ಧಾರ ಕಾರ್ಯ ನಡೆಲಿದ್ದು ನೂತನ ಸಮಿತಿಯ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಅಗತ್ಯವಿರುವ ಶ್ರಮ ಸೇವೆಯನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು. 


ಈ ಬಗ್ಗೆ ನಡೆದ ಸ್ವಯಂ ಸೇವಕರ ಸಮಾಲೋಚನಾ ಸಭೆಯಲ್ಲಿ  ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಎಂ.ಕೆ.ಆನಂದ,ಸೇವಾ ಸಮಿತಿ ಅಧ್ಯಕ್ಷ  ಡಿ ದಾಮೋದರ,ಕಾರ್ಯದರ್ಶಿ ಡಿ.ರಾಜೇಂದ್ರ ರೈ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments