ಪೆರ್ಲ: ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಆಶ್ರಯದಲ್ಲಿ ನ.3ರಂದು ಬೆಳಗ್ಗೆ 9.30ರಿಂದ "ಸಲಿಲ ಅಕ್ಷರ ಪಯಣ...!" ಸಾಹಿತ್ತಿಕ, ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ನೀಲೇಶ್ವರಂ ಕೋಟ್ಟಪ್ಪುರಂ ಬೋಟ್‌ಹೌಸ್ ನಲ್ಲಿ ನಡೆಯಲಿದೆ.
ಪ್ರೇಮಾ ಆರ್. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀನಿವಾಸ ಪರಿಕ್ಕಾನ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ದಿವ್ಯಾ ಗಟ್ಟಿ ಪರಕ್ಕಿಲ ಅಭಿನಂದನಾ ಭಾಷಣ ಮಾಡುವರು. ಕೃಷ್ಣ ದರ್ಬೆತ್ತಡ್ಕ, ಅಜಿತ್ ಸ್ವರ್ಗ, ವೇದಿಕೆ ಸಂಚಾಲಕ ಸುಭಾಷ್ ಪೆರ್ಲ, ಜಯ ಮಣಿಯಂಪಾರೆ, ಶರಣ್ಯ ನಾರಾಯಣನ್ ಉಪಸ್ಥಿತರಿರುವರು.
ಸುಂದರ ಬಾರಡ್ಕ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಬಾಲಕೃಷ್ಣ ಏಳ್ಕಾನ ನಿರೂಪಿಸುವರು. ಮಧ್ಯಾಹ್ನ ಬಳಿಕ ಅಂತ್ಯಾಕ್ಷರಿ, ಸಂಗೀತ ರಸಮಂಜರಿ, ಮನರಂಜನಾ ಕಾರ್ಯಕ್ರಮ, ಸಮಾರೋಪ ಸಮಾರಂಭ, ಪ್ರಮಾಣ ಪತ್ರ ವಿತರಣೆ ನಡೆಯಲಿದೆ. ಪ್ರೇಮ ಆರ್ ಶೆಟ್ಟಿ, ನಿರ್ಮಲ ಶೇಷಪ್ಪ ಖಂಡಿಗೆ, ಉದಯ ಕುಮಾರ್ ಮುಂಡೋಡು ಉಪಸ್ಥಿತರಿರುವರು.


0 Comments