ನಾಳೆ ಪೆರ್ಲ ಪೇಟೆಯಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಡಂಗುರ ಮೆರವಣಿಗೆ

 


ಪೆರ್ಲ : 63ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವು 2024 ನವೆಂಬರ್ 11,12,18,19,20 ದಿನಾಂಕಗಳಲ್ಲಾಗಿ ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಲಿದೆ. ವಿದ್ಯಾರ್ಥಿಗಳ  ಕಲಾವೈವಿಧ್ಯತೆಯ ಅನಾವರಣದ ಯಶಸ್ವಿಗೆ  ಸಿದ್ಧತೆಗಳು ಈಗಾಗಲೇ

ಅಂತಿಮ ಹಂತದಲ್ಲಿದ್ದು  ದಿನಗಣನೆಯಲ್ಲಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ನಡೆಯುವ ಈ ಕಲೋತ್ಸವವನ್ನು ನಾಡಿನ ಮಹೋತ್ಸವವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಇದರ ಪ್ರಚಾರಾರ್ಥ ದಿನಾಂಕ 9 -11-2024ನೇ ಶನಿವಾರ ಮಧ್ಯಾಹ್ನ 2.30 ಗಂಟೆಗೆ ಪೆರ್ಲ ಪೇಟೆಯಲ್ಲಿ‌ ಡಂಗುರ ಮೆರವಣಿಗೆ ನಡೆಯಲಿದೆ. ವಿವಿಧ ಕಲಾರೂಪಗಳ‌ನ್ನು   ಒಳಗೊಂಡಿರುವ ಸಾಂಪ್ರದಾಯಿಕ ಮೆರವಣಿಗೆಯಲ್ಲಿ  ಜನಪ್ರತಿನಿಧಿಗಳು, ಸಾಮಾಜಿಕ,ಧಾರ್ಮಿಕ ಮುಂದಾಳುಗಳು, ವ್ಯಾಪಾರಿಗಳು,ವಿವಿಧ ಸಂಘ ಸಂಸ್ಥೆಗಳು ಹಾಗೂ ನಾಡಿನ ವಿದ್ಯಾಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments