ಪೆರ್ಲ : ಸ್ವರ್ಗ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಸಮಾರಂಭವನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಎಂ ಇವರು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಾಜಿ.ಪಂ.ಸದಸ್ಯ ರವಿ ವಾಣೀನಗರ ವಹಿಸಿದರು.ಸಭೆಯಲ್ಲಿ ಸಭೆಯಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಸಿ.ಡಿ.ಪಿ.ಒ ಮೈಮೂನ, ಅಂಗನವಾಡಿ ಸೂಪರ್ ವೈಸರ್ ಗಳಾದ ಶ್ರೀಮತಿ ಲಿಸ್ಸಿ,ಶ್ರೀಮತಿ ಅಂಜೂಷಾ,ಶ್ರೀಮತಿ ಅನ್ಸಿ ,ಕುಟುಂಬಶ್ರೀ ಸಿ.ಡಿ.ಎಸ್ ಉಪಾಧ್ಯಕ್ಷೆ ಶಶಿಕಲಾ ಕೆ,ಮಂಗಳ ಕಲಾ ಸಾಹಿತ್ಯ ವೇದಿಕೆಯ ಗಣೇಶ್ ಭಟ್ ಸ್ವರ್ಗ ಉಪಸ್ಥಿತರಿದ್ದರು.
ಸ್ವರ್ಗ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರತ್ನ ಬೈರಡ್ಕ ಇವರನ್ನು ಸನ್ಮಾನಿಸಲಾಯಿತು.
ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಕಾರ್ಯಕ್ರಮದ ಮೊದಲು ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ವೇಷ ಧರಿಸಿ ಮಕ್ಕಳು ,ಹೆತ್ತವರು ಮೆರವಣಿಗೆಯನ್ನು ನಡೆಸಿರು..ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಎಂ ಸ್ವಾಗತಿಸಿದರು.ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿದರು.ಬಾಲಕೃಷ್ಣ ಆಚಾರ್ಯ ಪಿ.ಯಸ್ ಕಟ್ಟೆ ಇವರು ಪ್ರಾರ್ಥನೆ ಹಾಡಿದರು.ಅಂಗನವಾಡಿ ಸಹಾಯಕಿ ಗೀತಾ ವಂದಿಸಿದರು




0 Comments