ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತು ಮಟ್ಟದ 2024-25ನೇ ವರ್ಷದ ಕೇರಳೋತ್ಸವ ವಿವಿದೆಡೆಗಳಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ತಮಗಳೊಂದಿಗೆ ಜರಗಿ ರವಿವಾರದಂದು ಪಂಚಾಯತು ಸಭಾಂಗಣದಲ್ಲಿ ವೇದಿಕೆ ಸ್ಪರ್ಧೆಗಳ ಮೂಲಕ ಸಂಪನ್ನಗೊಂಡಿತು. 440 ಅಂಕಗಳೊಂದಿಗೆ ಮಾತೃಭೂಮಿ ಸ್ವರ್ಗ ಸಮಗ್ರ ಬಹುಮಾನ ಹಾಗೂ 193 ಅಂಕಗಳೊಂದಿಗೆ ಯುವ ಕೂಟಾಯಿಮ ಪೆರ್ಲ ದ್ವಿತೀಯ ಬಹುಮಾನ, 52 ಅಂಕಗಳೊಂದಿಗೆ ಆರ್.ಎಂ.ಕೆ. ಸೇರಾಜೆ ತೃತೀಯ ಬಹುಮಾನ ಗಳಿಸಿಕೊಂಡಿತು. ಎಣ್ಮಕಜೆ ಗ್ರಾ.ಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದರು. ಉಪಾಧ್ಯಕ್ಷೆ ರಮ್ಲ ಸಭೆಯ ಅಧ್ಯಕ್ಷತೆವಹಿಸಿದ್ದರು. ಮಂಜೇಶ್ವರ ಬ್ಲೋಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌಧಭಿ ಹನೀಫ್, ಪಂ.ಸದಸ್ಯರುಗಳಾದ ನರಸಿಂಹ ಪೂಜಾರಿ, ರಾಮಚಂದ್ರ ಎಂ.ಶಶಿಧರ, ಅಸಿಸ್ಟೆಂಟ್ ಕಾರ್ಯದರ್ಶಿ ಎ.ಎಸ್.ಗಿರೀಶ್, ತೀರ್ಪುಗಾರರಾದ ಸುಂದರ ಬಾರಡ್ಕ, ಉದಯ ಕುಮಾರ್ ಎಂ ಮೊದಲಾದವರು ಉಪಸ್ಥಿತರಿದ್ದರು. ನವಾಸ್ ಮರ್ತ್ಯ ಸ್ವಾಗತಿಸಿ, ಆಫೀದ್ ವಂದಿಸಿದರು.ಆಶ್ರಫ್ ಮರ್ತ್ಯ ನಿರೂಪಿಸಿದರು.
0 Comments