ಅಡೂರು: ಗಡಿನಾಡಿನ ಅಚ್ಚ ಕನ್ನಡ ಪ್ರದೇಶವಾಗಿದ್ದ ದೇಲಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋರಿ ಕಂಡ ಅಂಗನವಾಡಿಗೆ ಕನ್ನಡೇತರ ಅಧ್ಯಾಪಕಿಯನ್ನು ನೇಮಕಗೊಳಿಸಿದ ಗ್ರಾಮ ಪಂಚಾಯತ್ ಸಮಿತಿಯ ನಡೆಯ ವಿರುದ್ದ ಹೋರಾಟ ತಾರಕಕ್ಕೇರುತ್ತಿದ್ದು ಇಂದುವ ಹೋರಾಟ ಸಮಿತಿಯ ನೇತೃತ್ವದಲ್ಲಿ ಕನ್ನಡಾಭಿಮಾನಿಗಳು ಒಟ್ಟಾಗಿ ದೇಲಂಪಾಡಿ ಪಂಚಾಯತ್ ಪರಿಸರದಲ್ಲಿ ಪ್ರತಿಭಟನೆ ಧರಣಿ ನಡೆಸಿದರು.ನ್ಯಾಯವಾದಿ ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸಿದ್ದು ಅಶೋಕ್ ಸರಳಾಯ ಅಂಬಿತ್ತಿಮಾರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ನ್ಯಾಯವಾದಿ ಮುರುಳಿಧರ ಬಳ್ಳುಕುರಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ದೇಲಂಪಾಡಿ ಪಂ. ಸದಸ್ಯೆ ಪ್ರಮೀಳಾ ಸಿ ನಾಯ್ಕ್, ಜಯ ನಾರಾಯಣ ತಾಯನ್ನೂರು, ಸುಂದರ ಬಾರಡ್ಕ ಸಭೆಯಲ್ಲಿ ಉಪಸ್ಥಿತರಿದ್ದರು. ಹೋರಾಟ ಸಮಿತಿಯ ನಯನ ಗಿರೀಶ ಅಡೂರು,ಗಂಗಾಧರ ಅಡೂರು ಹಾಗೂಎಎಲ್ ಎಂ ಎಸ್ ಸಮಿತಿಯ ಸದಸ್ಯರು, ಮಕ್ಕಳ ಹೆತ್ತವರು, ಕನ್ನಡ ಅಭಿಮಾನಿಗಳು ಪ್ರತಿಭಟನೆಗೆ ನೇತೃತ್ವ ನೀಡಿದರು. ಅಡೂರು ಕ್ಷೇತ್ರ ಪರಿಸರದಿಂದ ಹೊರಟ ಕನ್ನಡಾಭಿಮಾನಿಗಳು ಘೋಷಣಾ ವಾಕ್ಯದೊಂದಿಗೆ ಪಂ.ಕಚೇರಿ ಮುಂಭಾಗ ಜಮಾಸಿದರು. ಶೀಘ್ರವೇ ಸಮಸ್ಯೆಗೆ ಪರಿಹಾರ ಕಾಣದಿದ್ದರೆ ಹೋರಾಟವನ್ನು ಸಕ್ರಿಯಗೊಳಿಸಿ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.





0 Comments