ವಿದ್ಯಾನಗರ: ಸಮಾಜದಲ್ಲಿ ಮುಖ್ಯ ಸವಾಲುಗಳನ್ನೆದುರಿಸುವವರನ್ನು ಮುಖ್ಯ ಧಾರೆಯಲ್ಲಿ ಸೆಳೆದುಕೊಳ್ಳಬೇಕು.ಅವರ ಮಾನಸಿಕ ಆರೋಗ್ಯಕ್ಕೆ ಪೂರಕವಾದ ಯೋಜನೆಗಳನ್ನು ಅಳವಡಿಸುವುದಕ್ಕಾಗಿ ನಾವೆಲ್ಲಾ ಕೈಜೋಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀ ಸೆಬಾಸ್ಟಿಯನ್ ಅಭಿಪ್ರಾಯ ಪಟ್ಟರು.
ಅವರು ಉಳಿಯತ್ತಡ್ಕ ಪ್ರಗತಿ ವಿಶೇಷ ಚೇತನ ಶಾಲೆ ಆಯೋಜಿಸಿದ ಅಲ್ಲಿನ ಮಕ್ಕಳ ಜತೆ ಕ್ರಿಸ್ಮಸ್ ಹಬ್ಬಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾನಗರ ಪೋಲಿಸ್ ಠಾಣೆಯ ಎ. ಎಸ್. ಐ ಶ್ರೀಮತಿ ಶೀಬಾ ವಹಿಸಿದ್ದರು, ಎಸ್, ಐ ಶ್ರೀ ವಿಜಯನ್ ಅತಿಥಿಯಾಗಿದ್ದರು. ಕವಿ, ಸಂಘಟಕ ಶ್ರೀ ಸುಭಾಷ್ ಪೆರ್ಲ, ನಿವೃತ್ತ ಗ್ರಾಮಾಧಿಕಾರಿ ಶ್ರೀ ಕೃಷ್ಣ ದರ್ಭೆತ್ತಡ್ಕ, ಸಾಮಾಜಿಕ ಕಾರ್ಯಕರ್ತ ಶ್ರೀ ರಾಮ ಪಟ್ಟಾಜೆ, ಶ್ರೀಮತಿ ಬೇಬಿ ಜಯರಾಮ್, ಸುಂದರ ಬಾರಡ್ಕ, ಶ್ರೀಮತಿ ನವೀನ ಏಳ್ಕಾನ, ಶ್ರೀಮತಿ ಶಶಿಕಲಾ, ಶ್ರೀ ಮನೇಷ್ ಕುಮಾರ್ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿದ್ಯಾರ್ಥಿ ಶ್ರೀ ಅಜಯಶಂಕರ್ ಮಕ್ಕಳಿಗಾಗಿ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು, ಪ್ರಗತಿ ವಿಶೇಷ ಚೇತನ ಶಾಲೆಯ ನಿರ್ದೇಶಕ ಶ್ರೀ ಉದಯಕುಮಾರ್ ಸ್ವಾಗತಿಸಿದ ಸಭೆಗೆ ಅದ್ಯಾಪಿಕೆ ಚಿತ್ರಾ ಎಂ ವಂದನಾರ್ಪಣೆಗೈದರು.


0 Comments