ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)
ದುಬೈ: ಈ ಹಿಂದೆ ಯುಎಇಯಲ್ಲಿ ದಾಖಲೆ ಪ್ರದರ್ಶನ ಕಂಡ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರದ ತಂಡ ಇದೀಗ ಮತ್ತೊಮ್ಮೆ ಕರಾವಳಿಯ ತುಳುವರ, ತುಳು ಅಭಿಮಾನಿಗಳ ಮನಸೂರೆಗೈಯುವ ಚಿತ್ರದೊಂದಿಗೆ ಅರಬ್ ರಾಷ್ಟ್ರಕ್ಕೆ ಕಾಲಿರಿಸಲಿದ್ದಾರೆ. 'ಮಿಡಲ್ ಕ್ಲಾಸ್ ಫ್ಯಾಮಿಲಿ' ಎಂಬ ಕೌಟುಂಬಿಕ ನವಿರು ಹಾಸ್ಯಮಯ ಸನ್ನಿವೇಷದ ಮಾರ್ಮಿಕ ಚಿತ್ರ ವೀಕ್ಷಕರ ನಡುವೆ ಗಮನ ಸೆಳೆಯಲು ಸಜ್ಜಾಗಿದೆ.
ಈ ಚಿತ್ರದ ಯುಎಇಯ ಪ್ರೀಮಿಯರ್ ಪ್ರದರ್ಶನದ ಪೊಸ್ಟರ್ ಬಿಡುಗಡೆ,ವಿಡಿಯೋ ಸಾಂಗ್ ಮತ್ತು ಟಿಕೆಟ್ ಬಿಡುಗಡೆ ಕಾರ್ಯಕ್ರಮ ಡಿ.8 ರಂದು ದುಬೈಯ ಪ್ರತಿಷ್ಠಿತ ಹೊಟೇಲ್ ನಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್,ಹರೀಶ್ ಬಂಗೆರ ಆತ್ಮನಂದ ರೈ,ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಿನೇಶ್ ಶೆಟ್ಟಿ ಕೊಟ್ಟಿಂಜ,ಬ್ರಾಹ್ಮಣ ಸಮಾಜದ ಸುಧಾಕರ ರಾವ್ ಪೇಜಾವರ,ಉದ್ಯಮಿಗಳಾದ ಬು.ಅಬ್ದುಲ್ಲ, ಗುಣಶೀಲ್ ಶೆಟ್ಟಿ, ರಮಾನಂದ ಶೆಟ್ಟಿ, ಸಂದೀಪ್ ರೈ ನಂಜೆ,ಡಾ.ಶ್ರೀಮತಿ ರಶ್ಮಿ ನಂದ ಕಿಶೋರ್,ಕರ್ನಾಟಕ ಸಂಘ ದುಬೈ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪರವರು ಹಾಗೂ ಚಿತ್ರ ತಂಡದ ನಿರ್ಮಾಪಕರು, ಸಹ ನಿರ್ಮಾಪಕರು, ಚಿತ್ರದ ನಟ ನಟಿಯರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭವನ್ನು ಹಾರೈಸಿದರು.
"ಮಿಡ್ಲ್ ಕ್ಲಾಸ್ ಕುಟುಂಬದಿಂದ ನಾನು ಬಂದಿರುವ ಕಾರಣ ಈ ರೀತಿಯ ಟೈಟಲ್ ಇದ್ದ ಚಿತ್ರ ನೋಡುವ ಕಾತುರದಿಂದ ಇದ್ದೆನೆ.ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರ ದುಬೈಯ ಮಣ್ಣಿನಿಂದ ಉದ್ಘಾಟನೆಗೊಂಡು ಯಶಸ್ಸನ್ನು ಸಾದಿಸಿತೋ ಆ ರೀತಿ ಈ ಚಿತ್ರ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಚಿತ್ರವು ಸುಪರ್ ಹಿಟ್ ಆಗಿ ತುಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿ" ಎಂದು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭವನ್ನು ಹಾರೈಸಿದರು. ಪೋಸ್ಟರ್ ಬಿಡುಗಡೆಗೊಳಿಸಿಸಲಾಯಿತು.
ಚಿತ್ರದ ಫ್ಯಾಮಿಲಿ ವೀಡಿಯೋ ಹಾಡನ್ನು ಅಬುಧಾಬಿಯ ಉದ್ಯಮಿ ಸುಂದರ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಕರ್ನಾಟಕ ಸಂಘ ರಾಸ್ ಅಲ್ ಕೈಮಾದ ಅಧ್ಯಕ್ಷರಾದ ಸಂತೋಷ್ ಹೆಗ್ಡೆ,ಸಂಘಟಕ ನೋಯಲ್ ಅಲ್ಮೇಡಾ,ಶಾನ್ ಪೂಜಾರಿ,ದೇವಿ ಪ್ರಸಾದ್ ಶೆಟ್ಟಿ, ಪಟ್ಲ ಫೌಂಡೇಷನ್ ಯುಎಇಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾಡೂರುಗುತ್ತು,ವಸಂತ್ ಶೆಟ್ಟಿ, ಮುಂಬಯಿಯ ಖ್ಯಾತ ಪತ್ರಕರ್ತ ರೋನ್ಸ್ ಬಂಟ್ವಾಳ, ಗಟ್ಟಿ ಸಮಾಜದ ವರದರಾಜ್ ಶೆಟ್ಟಿಗಾರ್,ರಾಜೇಶ್ ಕುತ್ತರ್,ಪ್ರಕಾಶ್ ಪಕಳ,ದೀಪಕ್ ಪಾಲಡ್ಕ ಉಪಸ್ಥಿತರಿದ್ದರು.ಚಿತ್ರದ ವೀಡಿಯೋ ಹಾಡನ್ನು ನೋಡಿದ ಪ್ರೇಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದರು.
ಚಿತ್ರದ ಪ್ರೀಮಿಯರ್ ಪ್ರದರ್ಶನದ ಪಾಸ್ ಗಳನ್ನು ಯುಎಇಯ ಚಿತ್ರದ ಪ್ರಾಯೋಜಕರಾದ ಶ್ರೀಮತಿ ಮೋನಿಷ ಶರತ್ ಶೆಟ್ಟಿ, ಹರೀಶ್ ಬಂಗೆರ,ಹರೀಶ್ ಶೇರಿಗಾರ್,ಗಿರೀಶ್ ನಾರಾಯಣ್,ದೀಪಕ್ ಕುಮಾರ್ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಅಶೋಕ್ ಬೈಲೂರು,ದಯಾ ಕಿರೋಡಿಯನ್,ವಿನೋದ್ ಉಳ್ಳಾಲ್,ದಯಾನಂದ ಹೆಬ್ಬಾರ್,ಸತೀಶ್ ಉಳ್ಳಾಲ್,ವಾಸು ಕುಮಾರ್ ಶೆಟ್ಟಿ, ಮಲ್ಲಿಕಾರ್ಜುನ ಗೌಡ,ನಾಗರಾಜ ರಾವ್ ಉಡುಪಿ,ಪ್ರಜ್ವಲ್ ಶೆಟ್ಟಿ, ಯಕ್ಷ ಮಿತ್ರರು ದುಬೈಯ ಜಯಂತ್ ಶೆಟ್ಟಿ, ತುಳು ಪಾತೆರ್ಗ ತುಳು ಒರಿಪಾಗದ ರಿತೇಶ್ ಅಂಚನ್,ಶ್ರೀಮತಿ ಲವೀನ ಫೆರ್ನಾಂಡೀಸ್, ಪೀಟರ್ ಜಾಯ್ಸಾನ್,ಭರತ್ ರಾಮ್,ಸಂತೋಷ್ ಶೆಟ್ಟಿ ಪೊಳಲಿ ಉಪಸ್ಥಿತರಿದ್ದರು.
ಊರಿಂದ ಆಗಮಿಸಿದ ಚಿತ್ರದ ನಾಯಕ ವಿನೀತ್ ಕುಮಾರ್,ನಾಯಕಿ ಸಮತಾ ಅಮೀನ್,ನಿರ್ದೇಶಕ ರಾಹುಲ್ ಅಮೀನ್,ನಿರ್ಮಾಪಕ ಆನಂದ ಕುಂಪಲ,ಸಹಾ ನಿರ್ಮಾಪಕ ನಿತೀನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಭರತ್ ಕುಮಾರ್ ಗಟ್ಟಿ,ಕಲಾ ನಿರ್ದೇಶಕ ಪವನ್ ಕುಮಾರ್ ಶೆಟ್ಟಿ ಹಾಗೂ ಯುಎಇಯ ಚಿತ್ರದ ಸಹಾ ನಿರ್ಮಾಪಕರಾದ ಮಿತ್ರಂಪಾಡಿ ಜಯರಾಮ ರೈ,ಸ್ವಸ್ತಿಕ್ ಆಚಾರ್ಯರು ಯುಎಇಯಲ್ಲಿ ಇರುವ ಎಲ್ಲಾ ತುಳುವರು ಈ ಚಿತ್ರವನ್ನು ನೋಡಿ ಚಿತ್ರದ ಯಶಸ್ವಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಮನರಂಜನೆಯ ಕಾರ್ಯಕ್ರಮದ ಅಂಗವಾಗಿ ನೃತ್ಯ ಕಾರ್ಯಕ್ರಮ ಮತ್ತು ಯುಎಇಯ ಪ್ರಸಿದ್ಧ ಗಾಯಕ ಗಾಯಕಿಯರಿಂದ ಸಂಗೀತ ರಸಮಂಜರಿ ನಡೆಯಿತು.
ನಟ ವಿನೀತ್ ಕುಮಾರ್, ಗಿರೀಶ್ ನಾರಯಣ್ ಮತ್ತು ಸ್ವಸ್ತಿಕ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಾಹುಲ್ ಅಮೀನ್ ಧನ್ಯವಾದವಿತ್ತರು.
ಯುಎಇಯಲ್ಲಿ ಜ.18,19 ರಂದು ಪ್ರೀಮಿಯರ್ ಪ್ರದರ್ಶನ
ನಟ ರಾಹುಲ್ ಅಮೀನ್ ನಿರ್ದೇಶನದ ಈ ಚಿತ್ರವು ಜನವರಿ 18 ಮತ್ತು 19ರಂದು ಯುಎಇಯ ಅಬುಧಾಬಿ, ರಾಸ್ ಅಲ್ ಕೈಮಾ,ದುಬೈ, ಶಾರ್ಜಾದ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ.ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರದ ಮೂಲಕ ಯಶಸ್ಸು ಕಂಡಿದ್ದ ರಾಹುಲ್ ಅಮೀನ್- ವಿನೀತ್ ಕುಮಾರ್ ಜೊತೆಯಾಗಿ ಈ ಚಿತ್ರದ ಮೂಲಕ ಚಿತ್ರದ ಮೂಲಕ ರಂಜಿಸಲು ಬರುತ್ತಿದ್ದಾರೆ.ವಿನೀತ್ ಕುಮಾರ್ ಗೆ ನಾಯಕಿಯಾಗಿ ಸಮತಾ ಅಮೀನ್ ಅವರು ನಾಯಕಿಯಾಗಿದ್ದರೆ.ನವೀನ್ ಡಿ.ಪಡಿಲ್,ಅರವಿಂದ ಬೋಳಾರ್,ಬೋಜರಾಜ ವಾಮಂಜೂರು,ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ,ಚೈತ್ರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಯುಎಇಯ ಗಮ್ಮತ್ ಕಲಾವಿದೆರ್ ನ ಐದು ಕಲಾವಿದರ ಅಭಿನಯ
ಯುಎಇಯ ಹೆಸರಾಂತ ನಾಟಕ ತಂಡ ಗಮ್ಮತ್ ಕಲವಿದೆರ್ ಯುಎಇಯ ಕಲಾವಿದರು 'ಮಿಡ್ಲ್ ಕ್ಲಾಸ್ ಫ್ಯಾಮಿಲಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ.ತಂಡದ ಚಿದಾನಂದ ಪೂಜಾರಿ ವಾಮಂಜೂರು,ಆಶಾ ಕೊರೇಯ,ಗಿರೀಶ್ ನಾರಾಯಣ್,ಡೊನಿ ಕೊರೇಯ,ದೀಪ್ತಿ ದಿನ್ ರಾಜ್,ಕಿರಣ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ.









0 Comments