ಕಾಟುಕುಕ್ಕೆ ಸುಬ್ರಾಯ ದೇವಳದ ಗಣಕೀಕೃತ ಸೇವಾ ಸೌಲಭ್ಯಕ್ಕೆ ಸೇವಾ ರೂಪವಾಗಿ ಉದ್ಯಮಿ ಶಿವಶಂಕರ್ ನೆಕ್ರಾಜೆಯಿಂದ ಕಂಪ್ಯೂಟರ್ ಬಿಲ್ಲಿಂಗ್ ಕೊಡುಗೆ


ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಗಣಕೀಕೃತ ಸೇವಾ ಸೌಲಭ್ಯಕ್ಕಾಗಿ ಅನಿವಾಸಿ ಉದ್ಯಮಿ ಶಿವಶಂಕರ್ ನೆಕ್ರಾಜೆ ಸೇವಾ ರೂಪದಲ್ಲಿ ಕಂಪ್ಯೂಟರ್ ಬಿಲ್ಲಿಂಗ್  ಕೊಡುಗೆಯಾಗಿ ನೀಡಿದರು.ಇದರ ಉದ್ಘಾಟನೆಯನ್ನು  ಮಲಬಾರ್ ದೇವಸ್ವಂ ಬೋರ್ಡಿನ ಅಸಿಸ್ಟೆಂಟ್ ಕಮೀಶನರ್ ಕೆ.ಪಿ.ಪ್ರದೀಪ್ ಕುಮಾರ್ ನಡೆಸಿದರು.  


ಕ್ಷೇತ್ರದ ತಂತ್ರಿವರ್ಯ  ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಡಿಜಿಲೈಸ್ ಡ್  ಸೇವೆಯ ಕಂಪ್ಯೂಟರ್ ಸ್ವೀಚ್ ಆನ್ ಗೈದು ಪ್ರಥಮ ರಶೀದಿ ಸ್ವೀಕೃತಿ ನಡೆಸಿದರು‌.


ಡಿಜಿಟಲ್ ಸೇವಾ ಸೌಲಭ್ಯಕ್ಕೆ ಅಗತ್ಯದ ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು ಕೊಡುಗೆ ರೂಪದಲ್ಲಿ ನೀಡಿದ ಅನಿವಾಸಿ ಉದ್ಯಮಿ ಶಿವಶಂಕರ್ ನೆಕ್ರಾಜೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ  ತಾರನಾಥ ರೈ ಪಡ್ಡಂಬೈಲುಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಮೊಕ್ತೇಸರರಾದ ಗಿರೀಶ್ ಕುಮಾರ್ ಕಾಟುಕುಕ್ಕೆ, ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರಗುಡ್ಡೆ, ರಿತೇಶ್ ಕಿರಣ್ ಕಾಟುಕುಕ್ಕೆ,ದೇವಸ್ವಂ ಬೋರ್ಡಿನ ಹೆಡ್ ಕ್ಲಾರ್ಕ್ ರಘು, ಕವಯಿತ್ರಿ ರಾಜಶ್ರೀ ಟಿ.ರೈ ಪೆರ್ಲ, ಕಾಸರಗೋಡು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಷ್ ನಗುಮುಗಂ, ಉತ್ಸವ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೋಡುಮಾಡು,ಕಾರ್ಯದರ್ಶಿ ಶಶಿಧರ ಮಾಸ್ತರ್, ಗೋಪಾಲ ಮಣಿಯಾಣಿ ಕೋಲಯಾಗುತ್ತು ಮೊದಲಾದವರು ಭಾಗವಹಿಸಿದ್ದರು.ಜನವರಿತಿಂಗಳಿನಿಂದ ಕ್ಷೇತ್ರದ  ಸೇವೆಗಳು ಗಣಕೀಕೃತವಾಗಿ ಲಭ್ಯವಾಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿರುವ ಕ್ಷೇತ್ರವೊಂದು ಇದೇ ಮೊದಲ ಬಾರಿಗೆ ಮುತುವರ್ಜಿ ವಹಿಸಿ ಡಿಜಿಟಿಲೈಸ್ ಡ್ ಸೇವಾ ಕೌಂಟರ್ ಸ್ಥಾಪಿಸಿ ಕಾರ್ಯ ರೂಪಕ್ಕೆ ತಂದಿರುವುದಕ್ಕೆ ದೇವಸ್ವಂ ಬೋರ್ಡ್ ಕ್ಷೇತ್ರ ಆಡಳಿತ ಸಮಿತಿಯನ್ನು ಪ್ರಶಂಸಿದೆ.

Post a Comment

0 Comments