ಶೇಣಿಯಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಕೇರಳ ಗ್ರಾಮೀಣ ಬ್ಯಾಂಕ್ ನ ಸುಸಜ್ಜಿತ ಕೊಠಡಿ ಉದ್ಘಾಟನೆ


ಪೆರ್ಲ ಕೇರಳ ಗ್ರಾಮೀಣ ಬ್ಯಾಂಕ್ ನ ಶೇಣಿ ಶಾಖೆಯನ್ನು ನೂತನ  ಕಟ್ಟಡಕ್ಜೆ ವರ್ಗಾವಣೆಗೊಳಿಸಿ  ಉದ್ಘಾಟನೆಗೊಳಿಸಲಾಯಿತು. 


ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಬ್ಯಾಂಕ್ ಕಚೇರಿ ಉದ್ಘಾಟಿಸಿ ಮಾತನಾಡುತ್ತಾ ನಾಡಿನ ಜನಪರ ಅಭಿವೃದ್ಧಿಯಲ್ಲಿ ಬ್ಯಾಂಕ್ ನ‌ ಪಾತ್ರ ಮಹತ್ತರವಾದುದು.ಜನ ಸಾಮಾನ್ಯರ ಸೇವಾತತ್ಪರತೆ ಬ್ಯಾಂಕ್ ಅಭಿವೃದ್ಧಿಗೂ ಕಾರಣವಾಗುತ್ತದೆ ಎಂದರು. ಜನರಲ್ ಮೆನೇಜರ್ ಚಿಂದಮ್ ರಮೇಶ್ ಅಧ್ಯಕ್ಷತೆವಹಿಸಿದ್ದರು. 


ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಬ್ಯಾಂಕ್ ಭದ್ರತಾ ಕೊಠಡಿ ಉದ್ಘಾಟಿಸಿದರು. 


ನೂತನ  ಕಚೇರಿಗೆ ಅಗತ್ಯವಾದ  ಕಟ್ಟಡವನ್ನು ಒದಗಿಸಿದ  ಸೂರ್ಯನಾರಾಯಣ ನಾಯಕ್ ಶೇಣಿ  ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿಸಲಾಯಿತು. ಎಣ್ಮಕಜೆ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಕೆ,ಶೇಣಿ ಶ್ರೀ ಶಾರದಾಂಬಾ ಎಯುಪಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ  ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ನೂತನ ವರ್ಷದ ಕನ್ನಡ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ವೀಣಾ ಎಸ್ ಪ್ರಾರ್ಥನೆ ಹಾಡಿದರು.ಕಾಸರಗೋಡು ವಲಯ ಪ್ರಬಂಧಕಿ ಶ್ರೀಲತಾ ವರ್ಮ ಸಿ ಸ್ವಾಗತಿಸಿ ಶೇಣಿ ಬ್ರಾಂಚ್ ಪ್ರಬಂಧಕ ವಿಷ್ಣು ವಿನು ವಂದಿಸಿದರು
.

Post a Comment

0 Comments