ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)
ದುಬೈ: ತುಳುನಾಡಿನ ಚಲನಚಿತ್ರವೊಂದು ದುಬೈಯಲ್ಲಿ ಫ್ರಿಮೀಯರ್ ಶೋ ಪ್ರದರ್ಶನಕ್ಕೆ ಮುನ್ನವೇ ಬಹು ನಿರೀಕ್ಷೆ ಮೂಡಿಸಿಕೊಂಡು ದಾಖಲೆ ಬರೆಯ ಹೊರಟಿದೆ. 'ಮಿಡಲ್ ಕ್ಲಾಸ್ ಫ್ಯಾಮಿಲಿ' ಎಂಬ ಕೌಟುಂಬಿಕ ನವಿರು ಹಾಸ್ಯಮಯ ಸನ್ನಿವೇಷದ ಮಾರ್ಮಿಕ ಚಿತ್ರ ದುಬೈಯಲ್ಲಿ ಚೊಚ್ಚಲ ಫ್ರಿಮೀಯರ್ ಷೋದ ಮೂಲಕ ವೀಕ್ಷಕರೆಡೆಗೆ ಕೊಂಡೊಯ್ಯಲು ಕಳೆದ ವಾರ ದುಬೈಯಲ್ಲಿ ಟಿಕೇಟ್ ಹಾಗೂ ಪೋಸ್ಟರ್ ಬಿಡುಗಡೆಗೊಳಿಸಿದ್ದು ಈ ಸಂದರ್ಭದಲ್ಲಿಯೇ 1,500 ಟಿಕೆಟ್ ಕ್ಷಣಾರ್ಧದಲ್ಲಿ ಮಾರಾಟವಾಗುವ ಮೂಲಕ ಜನ ಬೆಂಬಲಕ್ಕೆ ಪಾತ್ರವಾಗಿದೆ. ಚಿತ್ರದ ಯುಎಇ ವಿತರಣಾ ಹಕ್ಕು 30 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು ಇದು ಚಿತ್ರದ ಪ್ರಥಮ ದಾಖಲೆಯಾಗಿದೆ ಎಂದು ಚಿತ್ರ ಪ್ರೇಮಿಗಳು ಕೊಂಡಾಡುತ್ತಿದ್ದಾರೆ.
ಯುಎಇಯಲ್ಲಿ ಜ.18,19 ರಂದು ಪ್ರೀಮಿಯರ್ ಪ್ರದರ್ಶನ
ನಟ ರಾಹುಲ್ ಅಮೀನ್ ನಿರ್ದೇಶನದ ಈ ಚಿತ್ರವು ಜನವರಿ 18 ಮತ್ತು 19ರಂದು ಯುಎಇಯ ಅಬುಧಾಬಿ, ರಾಸ್ ಅಲ್ ಕೈಮಾ,ದುಬೈ, ಶಾರ್ಜಾದ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ.ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರದ ಮೂಲಕ ಯಶಸ್ಸು ಕಂಡಿದ್ದ ರಾಹುಲ್ ಅಮೀನ್- ವಿನೀತ್ ಕುಮಾರ್ ಜೊತೆಯಾಗಿ ಈ ಚಿತ್ರದ ಮೂಲಕ ಚಿತ್ರದ ಮೂಲಕ ರಂಜಿಸಲು ಬರುತ್ತಿದ್ದಾರೆ.ವಿನೀತ್ ಕುಮಾರ್ ಗೆ ನಾಯಕಿಯಾಗಿ ಸಮತಾ ಅಮೀನ್ ಅವರು ನಾಯಕಿಯಾಗಿದ್ದರೆ.ನವೀನ್ ಡಿ.ಪಡಿಲ್,ಅರವಿಂದ ಬೋಳಾರ್,ಬೋಜರಾಜ ವಾಮಂಜೂರು,ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ,ಚೈತ್ರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.



0 Comments