ದುಬೈ: ಈ ಹಿಂದೆ ಯುಎಇಯಲ್ಲಿ ದಾಖಲೆ ಪ್ರದರ್ಶನ ಕಂಡ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರದ ತಂಡ ಇದೀಗ ಮತ್ತೊಮ್ಮೆ ಕರಾವಳಿಯ ತುಳುವರ, ತುಳು ಅಭಿಮಾನಿಗಳ ಮನಸೂರಗೈಯುವ ಚಿತ್ರ ಅರಬ್ ದೇಶಕ್ಕೆ ದಾಖಲೆಯ ಪ್ರೀಮಿಯರ್ ಪ್ರದರ್ಶನಕ್ಕೆ ತಯರಾಗಿದೆ. 'ಮಿಡಲ್ ಕ್ಲಾಸ್ ಫ್ಯಾಮಿಲಿ' ಎಂಬ ಕೌಟುಂಬಿಕ ನವಿರು ಹಾಸ್ಯಮಯ ಸನ್ನಿವೇಶದ ಮಾರ್ಮಿಕ ಚಿತ್ರ ವೀಕ್ಷಕರ ನಡುವೆ ಗಮನ ಸೆಳೆಯಲು ಸಜ್ಜಾಗಿದೆ.
ನಟ ರಾಹುಲ್ ಅಮೀನ್ ನಿರ್ದೇಶನದ ಈ ಚಿತ್ರದ ಪ್ರೀಮಿಯರ್ ಪ್ರದರ್ಶನವು ಜನವರಿ 18 ಮತ್ತು 19ರಂದು ಯುಎಇಯ ಅಬುಧಾಬಿ, ರಾಸ್ ಅಲ್ ಕೈಮಾ,ದುಬೈ, ಶಾರ್ಜಾದ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ.ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರದ ಮೂಲಕ ಯಶಸ್ಸು ಕಂಡಿದ್ದ ರಾಹುಲ್ ಅಮೀನ್- ವಿನೀತ್ ಕುಮಾರ್ ಜೊತೆಯಾಗಿ ಈ ಚಿತ್ರದ ಮೂಲಕ ಚಿತ್ರದ ಮೂಲಕ ರಂಜಿಸಲು ಬರುತ್ತಿದ್ದಾರೆ.ವಿನೀತ್ ಕುಮಾರ್ ಗೆ ನಾಯಕಿಯಾಗಿ ಸಮತಾ ಅಮೀನ್ ಅವರು ನಾಯಕಿಯಾಗಿದ್ದರೆ.ನವೀನ್ ಡಿ.ಪಡಿಲ್,ಅರವಿಂದ ಬೋಳಾರ್,ಬೋಜರಾಜ ವಾಮಂಜೂರು,ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ,ಚೈತ್ರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಯುಎಇಯ ಹೆಸರಾಂತ ನಾಟಕ ತಂಡ ಗಮ್ಮತ್ ಕಲವಿದೆರ್ ಯುಎಇಯ ಕಲವಿದರು 'ಮಿಡ್ಲ್ ಕ್ಲಾಸ್ ಫ್ಯಾಮಿಲಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ.ತಂಡದ ಚಿದಾನಂದ ಪೂಜಾರಿ ವಾಮಂಜೂರು,ಆಶಾ ಕೊರೇಯ,ಗಿರೀಶ್ ನಾರಾಯಣ್,ಡೊನಿ ಕೊರೇಯ,ದೀಪ್ತಿ ದಿನ್ ರಾಜ್,ಕಿರಣ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜ.18,19 ರಂದು ದುಬೈಯ ಅಲ್ ಗುರ್ಯರ್ ಸೆಂಟರ್ ನ ಸಿನಿ ಮಂದಿರದಲ್ಲಿ ರಾತ್ರಿ.8:30,ಬೆಳಿಗ್ಗೆ 10:30,ಮಧ್ಯಾಹ್ನ 2:00,ಸಂಜೆ 5:30,ಶಾರ್ಜಾದ ಸಹಾರ ಮಾಲ್ ನಲ್ಲಿ ಜ.19 ರಂದು ಮಧ್ಯಾಹ್ನ 2:30,ಅಲ್ ವಾದ ಮಾಲ್ ಅಬುಧಾಬಿಯ ಸಿನಿ ಸೆಂಟರ್ ನಲ್ಲಿ ಅಪರಾಹ್ನ 3:30, ಅಲ್ ಐನ್ ನ ಬಿವಂಡಿ ಮಾಲ್ ನಲ್ಲಿ ಬೆಳಿಗ್ಗೆ 11:30 ಹಾಗೂ ರಾಸ್ ಅಲ್ ಕೈಮದ ಗಲ್ಫ್ ಸಿನಿ ಸೆಂಟರ್ ನಲ್ಲಿ ಜ.18 ರಂದು ರಾತ್ರಿ 8:30 ಕ್ಕೆ,ಜ.19ಕ್ಕೆ ಸಂಜೆ 5 ಗಂಟೆಗೆ ದುಬೈಯಲ್ಲಿ ಪ್ರೀಮಿಯರ್ ಪ್ರದರ್ಶನಗೊಳ್ಳಲಿದೆ. ಪ್ರೀಮಿಯರ್ ಪ್ರದರ್ಶನದ ಟಿಕೇಟ್ ಬೇಕಾದವರು 0557869002,0529157825 ನಂಬರ್ ಗೆ ಸಂಪರ್ಕಿಸಬೇಕೆಂದು ಸಂಘಟಕರು ವಿಶೇಷ ಚಾನೆಲ್ ಮೂಲಕ ತಿಳಿಸಿದ್ದಾರೆ.
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)



0 Comments