ಸೇವಾ ತತ್ಪರತೆಯ ಆಶೋತ್ತರದ ಆಶೋಕ್ ಬೈಲೂರು


        ವಿದೇಶ_ವಿಶೇಷ ಅಂಕಣ - 23

ಶಾರ್ಜಾ: ಸೇವಾ ಮನೋಭಾವ ಎಂಬುದು ಸಾಮಾನ್ಯ ವ್ಯಕ್ತಿತ್ವವನ್ನು ಅಸಾಮಾನ್ಯಗೊಳಿಸುತ್ತದೆ. ಅದರಲ್ಲಿ ಗಳಿಸುವ ಕೃತಾರ್ಥತೆ ಜೀವಮಾನದ ಸಾರ್ಥಕತೆಗೆ ಕಾರಣವಾಗುತ್ತದೆ. ಕೊಲ್ಲಿ ರಾಷ್ಟ್ರದಂತಹ ವಿದೇಶದ ನೆಲದಲ್ಲಿ ಇಂತಹವೊಂದು ಮನೋಭಾವವನ್ನು ಬೆಳೆಸಿಕೊಂಡು ಬಹುಮುಖ ಸೇವಾ ಕಾರ್ಯದಿಂದ ಗುರುತಿಸಿಕೊಂಡವರು ಇಲ್ಲೊಬ್ಬರಿದ್ದಾರೆ. ಹಾಗೆಂದು ಇವರೇನು ದೊಡ್ಡ ಉದ್ಯಮಿಯಲ್ಲ ಸಣ್ಣ ಉದ್ಯೋಗಿಯಷ್ಟೆ..! ಇವರೇ ಆಶೋಕ್ ಬೈಲೂರು.  ತನ್ನ ಕೈಲಾದ ರೀತಿಯಲ್ಲಿ ವಿವಿಧ ಸೇವಾ ಕಾರ್ಯದಿಂದ ತೊಡಗಿಸಿಕೊಂಡ ಇವರ ಬದುಕಿನ ಪರಿಪಾಠ ಇತರರಿಗೆ ಮಾದರಿಯಾಗಿದ್ದು ವಿಶೇಷ ಚಾನೆಲ್ ವಿದೇಶ_ವಿಶೇಷ ಅಂಕಣದ ಮೂಲಕ ಇವರ ಬದುಕನ್ನು ಬರಹ ರೂಪದಲ್ಲಿ ಅನಾವರಣಗೊಳಿಸುತ್ತಿದೆ. 

       ಅಳಿಲ ಸೇವೆಯ ಆಶೋಕ್

ಅರಬ್ ರಾಷ್ಟ್ರದ ಶಾರ್ಜಾದಲ್ಲಿ ಉದ್ಯೋಗ ನಿರತರಾಗಿರುವ ಆಶೋಕ್ ಬೈಲೂರು ಇಲ್ಲಿ ಎಲ್ಲಿಯೇ ತುಳು,ಕನ್ನಡ ಅಥವ ರಕ್ತದಾನದಂತಹ ಸಾರ್ವಜನಿಕ ಕಾರ್ಯಕ್ರಮ ನಡೆದರೂ ಅಲ್ಲಿ ಹಾಜರ್. ಗಾಯನ,ನಟನೆ ಇವರ ಹವ್ಯಾಸವಾದರೆ ಯಾವ ಸಂಘಟನಾತ್ಮಕ ಕಾರ್ಯಕ್ಕೂ ಆರಂಭದಿಂದ ಕೊನೆಯ ತನಕವೂ ಹೆಗಲು ಕೊಡುವ ಸೇವಾ ತತ್ಪರತೆಯ ಮನೋಭಾವ.ಆದ್ದರಿಂದಲೇ ಕೊಲ್ಲಿ ರಾಷ್ಟ್ರದ ಹೆಚ್ಚಿನ‌ ಅನಿವಾಸಿ ಭಾರತೀಯರ ಕಾರ್ಯಕ್ರಮದಲ್ಲಿ ಆಶೋಕ್ ಬೈಲೂರು ಗಮನ ಸೆಳೆಯುತ್ತಾರೆ.

ಮೂಲತಃ ಉಡುಪಿ ಜಿಲ್ಲೆಯ ಬೈಲೂರು ನಿವಾಸಿಯಾಗಿರುವ  ಸುಂದರ ಪಾಲನ್-ಅಪ್ಪಿ ಪಾಲನ್ ದಂಪತಿಗಳ ಪುತ್ರರಾದ ಆಶೋಕ್ ಬೈಲೂರು ಶಾರ್ಜಾ ಕೇಂದ್ರಿಕರಿಸಿರುವ  ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕಳೆದ 10 ವರ್ಷಗಳಿಂದ ಉದ್ಯೋಗ ನಿರತರಾಗಿದ್ದಾರೆ. ಜತೆಗೆ ಹಾಡು, ರಂಗಾಭಿನಯ, ಬೆಳ್ಳಿ ತೆರೆ ಜತೆ ನಂಟು ಬೆಳೆಸಿಕೊಂಡಿದ್ದಾರೆ.

ಶಿಕ್ಷಣ-ಉದ್ಯೋಗ

ಬೈಲೂರುನ ಮಹಿಷಮರ್ದಿನಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಬಳಿಕ ಕ್ರಿಶ್ಚಿಯನ್ ಹೈಸ್ಕೂಲ್ ಉಡುಪಿಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿ ಧಾರವಾಡದ ಶಿಶು ಕಲ್ಯಾಣ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ BSW,MSW ಪದವಿ ಗಳಿಸಿಕೊಂಡರು.ಬಳಿಕ ಆರಂಭದ ಮೂರು ವರ್ಷ ಇದೇ ಕೇಂದ್ರದ ವತಿಯಿಂದ ಸಾರ್ವಜನಿಕ ವಿಭಾಗದಲ್ಲಿ ಉದ್ಯೋಗ ನಿರತರಾಗಿದ್ದರು.

ಬಳಿಕ  ಬೆಂಗಳೂರಿನ ಶೋಭಾ ಕನ್ ಸ್ಟಕ್ಷನ್ ಕಂಪೆನಿಯಲ್ಲಿ 5 ವರ್ಷ ಕೆಲಸ ಮಾಡಿ ಅದೇ ಕಂಪನಿಯ ದುಬೈಯ ಬ್ರಾಂಚ್ ನ ಆಹ್ವಾನ ಮೇರೆಗೆ ಅರಬ್ ರಾಷ್ಟ್ರಕ್ಕೆ ಕಾಲಿರಿಸಿದರು. ದುಬೈನಲ್ಲಿ 4 ವರ್ಷ ಉದ್ಯೋಗದ ಬಳಿಕ  ಮನ್ಸೂನ್ construction companyಯಲ್ಲಿ 3 ವರ್ಷ ಉದ್ಯೋಗ ಕೈಗೊಂಡರು. ಇದೀಗ ಕಳೆದ 10 ವರ್ಷಗಳಿಂದ ಶಾರ್ಜದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ನಿರತರಾಗಿದ್ದಾರೆ.

ಬಹುಮುಖಿ ಕಲಾವಲ್ಲಭ: ಉತ್ತಮ ಹಾಡುಗಾರ,ನಾಟಕ ಕಲಾವಿದ, ಸಿನಿಮಾ ನಟರಾಗಿರುವ ಇವರು ಕಾಲೇಜು ಸಮಯದಲ್ಲಿ "ನಿನಾಸಂ" ನಾಟಕ ತಂಡದಲ್ಲಿ ಹಲವಾರು ನಾಟಕದಲ್ಲಿ ಅಭಿನಯಿಸಿ ಕಲಾ ನೈಪುಣ್ಯತೆ ಗಳಿಸಿಕೊಂಡಿದ್ದಾರೆ. 

ತುಳು ಸಿನಿಮಾ ರಂಗದ ನಿಕಟ ಸಂಪರ್ಕ ಹೊಂದಿರುವ ಆಶೋಕ್ ಬೈಲೂರು ನಿರೆಲ್,ಕಟಪಾಡಿ ಕಟ್ಟಪ,ಇಂಗ್ಲಿಷ್ ಎಂಕ್ಲೆಗ್ ಬರ್ಪುಜಿ ಬ್ರೋ, ಭೋಜರಾಜ್ MBBS ಮೊದಲಾದ ತುಳು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಪ್ರತಿಭಾ ಪ್ರದರ್ಶನ ಮೆರೆದಿದ್ದಾರೆ.

ಗಮ್ಮತ್ ಕಲಾವಿದರು ದುಬೈಯ ತಂಡದ ಬಯ್ಯಮಲ್ಲಿಗೆ ನಾಟಕ ಮಂಗಳೂರಿನ ಪುರಭವನದಲ್ಲಿ ಪ್ರದರ್ಶನಗೊಂಡಾಗ ಅದರಲ್ಲಿಯೂ  ಪಾತ್ರವೊಂದರಲ್ಲಿ ಅಭಿನಯಿಸಿ ಪ್ರಶಂಸನೆಗೆ ಪಾತ್ರರಾಗಿದ್ದಾರೆ.


ಉತ್ತಮ ಗಾಯಕರಾದ ಇವರು ಸೌಹರ್ದ ಲಹರಿ ದುಬೈಯ ತಂಡದ ಮ‌ೂಲಕ ಯುಎಇ ಕನ್ನಡ ತುಳು ಸಂಘ ಸಂಸ್ಥೆಗಳ ವೇದಿಕೆಯಲ್ಲಿ ಹಾಡಿ ಜನಪ್ರಿಯತೆಗೆ ಪಾತ್ರರಾಗಿದ್ದಾರೆ.

ಸಂಘಟನಾ ಸದಸ್ಯ: ಪ್ರತಿಯೊಂದೆಡೆಯಲ್ಲೂ ತನ್ನ ಪಾಲ್ಗೊಳ್ಳುವಿಕೆ ಮೂಲಕ ಸೇವಾ ತತ್ಪರತೆ ಮೆರೆಯುವ ಇವರು ಸಂಘಟನಾ ಕಾರ್ಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡವರು. 


ಯುಎಇಯ ಸೌಹಾರ್ದ ಲಹರಿ ಸಂಘಟನೆಯ ಉಪಾಧ್ಯಕ್ಷ, ತುಳುನಾಡ ರಕ್ಷಣಾ ವೇದಿಕೆ ದುಬೈಯ ಅದ್ಯಕ್ಷರಾಗಿ ಹಾಗೂ ಹಲವಾರು ಯುಎಇ ಯ ತುಳು-ಕನ್ನಡ ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ತುಂಬೆ ಹಾಸ್ಪಿಟಲ್‌ ಗ್ರೂಪಿನ ಸಹಯೋಗದೊಂದಿಗೆ ಹಲವಾರು ಮೆಡಿಕಲ್ ಕ್ಯಾಂಪ್ ಯೋಜನೆಯಲ್ಲಿ ಪಾಲ್ಗೊಳ್ಳುವ ಇವರು ರಕ್ತದಾನಿಯಾಗಿ ಯುಎಇ ಯಲ್ಲಿ ಹಲವಾರು ಬಾರಿ ರಕ್ತದಾನ ಮಾಡಿ ಸಾಮಾಜಿಕ ಸ್ವಾಸ್ಥ್ಯ ಕಾರ್ಯಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ.

ಬಾಲ್ಯದ ಸಮಯದಲ್ಲಿ ಸಾಕಷ್ಟು ಸಂಕಷ್ಟ ಜೀವನವನ್ನು ಅನುಭವಿಸಿದ ಇವರು ಕಾಲೇಜು ವ್ಯಾಸಂಗ ಸಮಯದಲ್ಲಿ ರಾತ್ರಿ ಹೋಟೆಲ್ ಕೆಲಸ ಮಾಡಿಕೊಂಡು ಹಗಲು ಹೊತ್ತು ಕಾಲೇಜ್ ಗೆ ಹೋಗಿ ಜೀವನ ನಿರ್ವಹಣೆಯ ಸಂಕಷ್ಟವನ್ನು   ಅರಿತಿದ್ದಾರೆ.  ಅದ್ದರಿಂದಲೇ ಕೊಲ್ಲಿ ರಾಷ್ಟ್ರಕ್ಕೆ ವಿಸಿಟ್ ವಿಸಾದಲ್ಲಿ ಬಂದು  ಕೆಲಸ ಸಿಗದೆ ಪರದಾಡುತ್ತಿದ್ದ  ಹಲವಾರು ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಮೂಲಕ ಸಹಾಯಕರಾಗಿದ್ದಾರೆ.ಈಗಾಗಲೇ ತನ್ನ ಹುಟ್ಟೂರಲ್ಲಿ ಕೆಲಸವಿಲ್ಲದೆ ಪರದಾಡುತ್ತಿದ್ದ 100ಕ್ಕಿಂತಲೂ ಅಧಿಕ ಮಂದಿಗೆ ಅರಬ್ ರಾಷ್ಟ್ರದ ಕಂಪೆನಿಗಳಲ್ಲಿ ಉದ್ಯೋಗ  ಮಾಡಿ ಕೊಟ್ಟ ಸಹೃದಯತೆ ಇವರದ್ದಾಗಿದೆ.


ಧರ್ಮಪತ್ನಿ ಸುಷ್ಮ ಅಶೋಕ್ ಮಕ್ಕಳಾದ ಅಶ್ವಿನಿ, ಅನುಷ್ಕ

ಅವರೊಡನೆ ಸಂತೃಪ್ತ ಸಂಸಾರ ಕಂಡುಕೊಂಡಿರುವ ಈ ಸೇವಾ ವಲ್ಲಭನ ಬದುಕು ಬಂಗಾರವಾಗಲಿ ಎಂದು ವಿಶೇಷ ಚಾನೆಲ್ ಶುಭ ಹಾರೈಸುತ್ತಿದೆ.

Post a Comment

2 Comments

  1. Congratulations ashok. You deserve all ecognition.

    ReplyDelete
  2. I am truly happy for Ashok, well deserved recognition. a soft-spoken social worker .

    ReplyDelete